ಆದಿ ಪುರುಷ್ ತಂತ್ರಜ್ಞಾನದ ವಿಜೃಂಬಣೆ- 3/5 ***
Posted date: 17 Sat, Jun 2023 08:37:07 AM
ಮನು
 
ಚಿತ್ರ; ಆದಿಪುರುಷ್
ನಿರ್ದೇಶನ; ಓಂ ರಾವತ್
ತಾರಾಗಣ:  ಪ್ರಭಾಸ್, ಕೀರ್ತಿ ಸನೂನ್, ಸನ್ನಿ ಸಿಂಗ್, ಸೈಫ್ ಆಲಿಖಾನ್, ಮತ್ತಿತತರು
ರೇಟಿಂಗ್  3/5 ***

ರಾಮಾಯಣದ ಕಥೆಗೆ ತಂತ್ರಜ್ಞಾನದ ಲೇಪನ‌ ಹಚ್ಚಿ ತಾಂತ್ರಿಕ ದೃಶ್ಯ ವೈಭವ ಕಟ್ಟಿಕೊಟ್ಟಿರುವ  ಚಿತ್ರ " ಆದಿ ಪುರುಷ್". ಚಿತ್ರದಲ್ಲಿ ಬಹುಪಾಲು ಕಂಪ್ಯೂಟರ್ ಗ್ರಾಫಿಕ್ಸ್ ವಿಜೃಂಬಿಸಿದೆ.ರಾಮ ರಾವಣರ ಯುದ್ದ,ಕತ್ತಿ ಗುರಾಣಿಗಳಿಂದ ಆರ್ಭಟಿಸಿದೆ. 
 
ಅಪ್ಪನ ಮಾತಿಗೆ ಕಟ್ಟುಬಿದ್ದು ರಾಮ ( ಪ್ರಭಾಸ್)  ವನವಾಸಕ್ಕೆ ತೆರಳುವ ಕಥೆ. ಜಾನಕಿ( ಕೃತಿ ಸನೂನ್) ಬಂಗಾರದ ಜಿಂಕೆ ನೋಡಿ ಅದರ ಮೇಲೆ ಆಸೆ ಪಡುವುದು, ಪತ್ನಿಗಾಗಿ ಅದನ್ನು ರಾಮ  ( ರಾಘವ- ಪ್ರಭಾಸ್) ತರಲು ಹೋದಾಗ ಅದು ಮಾಯಾ ಜಿಂಕೆ ಎಂದು ಗೊತ್ತಾಗುವದರ ವೇಳೆಗೆ ಇತ್ತ ಜಾನಕಿ ರಾವಣನಿಂದ ಅಪಹಣಕ್ಕೊಳಗಾಗುತ್ತಾಳೆ.ಲಂಕೆಯಲ್ಲಿ ಬಂಧಿತಳಾದ ಜಾನಕಿಯನ್ನು ಕರೆತರಲು  ಸುಘ್ರೀವನ ಸಹಾಯ ಪಡೆಯುವುದು ಆ ಮೂಲಕ ರಾವಣನ ಮೇಲೆ ದಂಡೆತ್ತಿ ಹೋಗುವ ಕಥೆನದ ತಿರುಳೇ ಆದಿಪುರುಷ್.
ರಾಮಾಯಣದ ಕಥೆ ಓದಿದವರಿಗೆ ಆದಿ ಪುರುಷ್ ಚಿತ್ರ ಇಷ್ಟೇನಾ ,ಗೊತ್ತಿರುವ ಇನ್ನಷ್ಟು ವಿಷಯಗಳನ್ನು ಬಿಟ್ಟಿದ್ದಾರಲ್ಲಾ ಅನ್ನಿಸಿದರೆ ಆಶ್ಚರ್ಯವಿಲ್ಲ. ಚಿತ್ರದಲ್ಲಿ ಬಳಸಲಾಗಿರುವ ತಂತ್ರಜ್ಞಾ‌ನ ,ಕಂಪ್ಯೂಟರ್ ಗ್ರಾಫಿಕ್ಸ್ ಬಲ್ಲಿ ರಾಮಾಯಣ ಹೀಗೂ ಇರಲಿದೆಯಾ ಎನ್ನುವುದನ್ನು ನೋಡಬಹುದು.
 
ತಂತ್ರಜ್ಞಾನ ವಿಜೃಂಬಿಸಿರುವುದರಿಂದ ಉಳಿದ ಕಲಾವಿದರು ಪ್ರಭಾಸ್ ಮತ್ತು ಸೈಫ್ ಆಲಿಖಾನ್  ಪಾತ್ರದ ಮುಂದೆ ಗೌಣವಾಗಿ ಬಿಡುತ್ತಾರೆ. ಆದಿ ಪುರುಷ್ ತಾಂತ್ರಿಕವಾಗಿ ಇಷ್ಡವಾಗಬಹುದು.
 
ರಾಮಾಯಣವನ್ನು ತೆರೆಯ ಮೇಲೆ ಕಟ್ಟಿಕೊಟ್ಟಿರುವ ನಿರ್ದೇಶಕ ಓಂ ರಾವತ್, ಧಾರ್ಮಿಕವಾಗಿಯೂ ಅಷ್ಡೇನು ಗಮನ ಹರಿಸಿದೆ ತಂತ್ರಜ್ಞಾನವನ್ನು ಅತಿಯಾಗಿ  ನೆಚ್ಚಿಕೊಂಡು ಸಿನಿಮಾ‌ ತೆರೆಗೆ ಕಟ್ಟಿಕೊಟ್ಟಿದ್ದಾರೆ. ಇಡೀ ಸಿನಿಮಾ ತಂತ್ರಜ್ಞಾನದಲ್ಲಿ ತುಂಬಿ ತುಳುಕಿದೆ.ತಂತ್ರಜ್ಞಾನ ಕೈ ಚಳಕ ನೋಡಲು ಆದಿ ಪುರುಷ್ ನೋಡಬಹುದು.

 
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed